ಕುವಲಯಾಪೀಡ
	ಕಂಸನ ಒಂದು ಆನೆ. ಇದು ಸಾವಿರ ಆನೆಗಳ ಬಲ ಪಡೆದಿತ್ತು. ಬಲರಾಮ, ಶ್ರೀಕೃಷ್ಣರು ಮಧುರೆಗೆ ಬಂದಾಗ ಕಂಸ ದುರಭಿಸಂಧಿಯಿಂದ ಅವರನ್ನು ಕೊಲ್ಲಲು ಯೋಚಿಸಿ ಈ ಆನೆಯನ್ನು ಊರಿನ ಮಹಾದ್ವಾರದಲ್ಲಿ ನಿಲ್ಲಿಸಿದ್ದ. ದ್ವಾರದ ಬಳಿ ಬಲರಾಮ, ಶ್ರೀಕೃಷ್ಣರು ಬಂದಾಗ ಮಾವುತ ಅವರ ಮೇಲೆ ಆನೆಯನ್ನು ಓಡಿಸಿದ. ಶ್ರೀ ಕೃಷ್ಣನ ಮುಂದೆ ಆನೆಯ ಸಾಹಸ ನಡೆಯದೆ ಅದು ಅವನಿಂದ ಹತವಾಯಿತು.											

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ